Surprise Me!

ಕಿಚ್ಚನ ರಾಜಕೀಯ ಭವಿಷ್ಯ ಹೇಳಿದ ರಾಜಗುರು | Filmibeat Kannada

2018-01-26 1 Dailymotion

ರಾಜ್ಯದ ಚುನಾವಣೆ ಸಮೀಪಿಸುತ್ತಿದೆ. ಸಿನಿಮಾರಂಗದಿಂದ ಯಾರೆಲ್ಲಾ ರಾಜಕೀಯ ಅಖಾಡಕ್ಕೆ ಇಳಿಯುತ್ತಾರೆ ಎನ್ನುವ ಪ್ರಶ್ನೆಗಳು ಶುರುವಾಗುತ್ತಿದೆ. ಸ್ಯಾಂಡಲ್ ವುಡ್ ನಿಂದ ಸಾಕಷ್ಟು ಸ್ಟಾರ್ ಗಳು ಚುನಾವಣೆಯಲ್ಲಿ ಸ್ಪರ್ಧಿಸುವ ನಿರೀಕ್ಷೆಗಳು ಹೆಚ್ಚಾಗುತ್ತಿವೆ.

ಕಳೆದ ಭಾರಿ ಚುನಾವಣೆಯಲ್ಲಿ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಶಿವರಾಜ್ ಕುಮಾರ್ ಹೀಗೆ ಸಾಕಷ್ಟು ಕಲಾವಿದರು ಅನೇಕ ಪಕ್ಷಗಳ ಪರವಾಗಿ ಪ್ರಚಾರ ಮಾಡಿದ್ದರು. ಒಬ್ಬರೇ ಎರಡು ಮೂರು ಪಕ್ಷಗಳಿಗೂ ಪ್ರಚಾರ ಮಾಡಿದುಂಟು. ಈ ಬಾರಿ ಯಾವ ಸ್ಟಾರ್ ಯಾವ ಪಕ್ಷಕ್ಕೆ ಸೇರುತ್ತಾರೆ? ಸ್ಟಾರ್ ನಟರು ರಾಜಕೀಯ ಸೇರಿದರೆ ಅವರಿಂದ ಆಗುವ ಲಾಭವೇನು?

ಇಂತಹ ಪ್ರಶ್ನೆಗಳ ಮಧ್ಯೆ ಕಿಚ್ಚ ಸುದೀಪ್ ಮಾತ್ರ ರಾಜಕೀಯಕ್ಕೆ ಲಕ್ಕಿ ಅನ್ನೋದು ಖಚಿತವಾಗಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ರಾಜಗುರು ದ್ವಾರಕನಾಥ್ ಭವಿಷ್ಯ ನುಡಿದಿದ್ದಾರೆ. ಸುದೀಪ್ ರಾಜಕೀಯ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Rajaguru Dwarkanath speaks about Kannada actor kichcha Sudeep's political future. Rajguru said Sudheep's supporting party will win . Rajaguru Dwarkanath famous astrologer

Buy Now on CodeCanyon